Wednesday, February 3, 2010

ನೆನಪಿದ್ದಿತೇ ಈ ಕನಸು?

ಭಾರತ್ ಮಹಲ್ ಮಂಗಳೂರಿನ ಮೊದಲ ಆಧುನಿಕ ಸುಸಜ್ಜಿತ ಚಿತ್ರಮಂದಿರವನ್ನು ಹೊಂದಿದ ವ್ಯವಸ್ಥಿತವಾದ ಶಾಪಿಂಗ್ ಮಹಲ್ ಅಂದು ಎನೋ ಹೊಸ ಬೆಳಕು ಹರಡಿದಂತೆ ಮನೋಹರವಾಗಿ ಕಾಣುತಿತ್ತು ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿ ತನ್ನನು ತಾನೇ ಸಿಂಗಾರಿಸಿ ಕಾಯುವಂತೆ ಇತ್ತು ಅಲ್ಲಿನ ವಾತವರಣ. ಬಂಗಾರ ದಿನದ ಗುಂಗಿನಲ್ಲಿ ಮುಳುಗಿ ತಮ್ಮದೆ ಆಕಾಶ ಲೋಕದಲ್ಲಿ ವಿಹರಿಸುತ್ತಿದ್ದ ಹುಡುಗ ಹುಡಿಗಿಯರು, ಹೊಸ ಜೀವನದ ಬದುಕಿಗೆ ನವೀನ ಬಣ್ಣಗಳನ್ನ ಅರಸುತ್ತಿರುವ ನವ ದಂಪತಿಗಳು, ಧೈನಂದಿನ ಕಾರ್ಯಗಳಿಂದ ಮುಕ್ತರಾಗಿ ಸಂಸಾರದೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಬಂದ ಸಂಸಾರಿಗಳು, ಆಟದ ಪಾರ್ಕಿನಲ್ಲಿ ತಮ್ಮದೆ ಮುಗ್ದ ಪ್ರಪಂಚವನ್ನು ಸೃಷ್ಟಿಸಿದ್ದ ಮಕ್ಕಳು ಅಲ್ಲಿನ ಈ ಯಾವ ಚಟುವಟಿಕೆಯು ಆ ನಿರೀಕ್ಷೆಗೆ ಕಾರಣವಗಿರಲಿಲ್ಲ.
ಕೆಳಗಿನ ಮಹಡಿಯಲ್ಲಿ ಶ್ರೀಮಂತ ಕಾನ್ವೆಂಟು ಶಾಲೆಯ ಮಕ್ಕಳಂತೆ ನೀಟಾಗಿ ತಲೆ ಬಾಚಿ ಬಿಳಿಯ ಅಂಗಿ ಅದರ ಮೇಲೆ ಕಪ್ಪು ಬಣ್ಣದ ಕೊಟು ಗೀಟು ಗೀಟಿನ ಟೈ ಕಪ್ಪು ಬಣ್ಣದ ಪ್ಯಾಂಟು ಅದೇ ಬಣ್ಣದ ಬೆಲ್ಟು ಅಂದೇ ಪಾಲಿಶ್ ಮಾಡಿದ ಶೂಗಳನ್ನು ಧರಿಸಿ ಆ ಮಕ್ಕಳು ತಮ್ಮ ಬೆರಗುಗಣ್ಣುಗಳಿಂದ ಅಲ್ಲಿನ ಶ್ರೀಮಂತಿಕೆಯನ್ನು ವೀಕ್ಷಿಸಿಸುತ್ತ ಶಿಸ್ತಿನಿಂದ ಎಕ್ಸಲೇಟರನಲ್ಲಿ ಮೊರನೆ ಮಹಡಿಯ ಚಿತ್ರಮದಿರಕ್ಕೆ ಸಾಗುತಿದ್ದರು, ಅವರೆಲ್ಲ ನನ್ನೊಂದೆಗೆ ಅಂದೇ ಬಿಡುಗಡೆಯಾದ ಐಸ್ ಎಜ್ ೪ ಚಿತ್ರವನ್ನ ವೀಕ್ಷಿಸಲು ಬಂದಿದ್ದರು ಈ ಕಾಯಕದಲಿ ನನ್ನ ಕೆಲವು ಸ್ನೇಹಿತರು ನನ್ನ ಜೋತೆಗಿದ್ದರು ನನಗೆ ನಿಜವಾದ ಕರ್ತವ್ಯದ ಹಾದಿಯಲ್ಲಿ ನಡೆದಂಥ ಅನುಭವ ಚಿತ್ರಮಂದಿರದಲ್ಲಿ ತಮ್ಮ ತಮ್ಮ ಆಸನದಲ್ಲಿ ಆಸೀನರಾದ ಮಕ್ಕಳು ಚಿತ್ರದಲ್ಲಿ ಬರುವ ಪ್ರಾಣಿ ಪಕ್ಷೀಗಳ ಮಾತು ಆಟವನ್ನ ನೋಡುತ್ತ ಚಿತ್ರದಲ್ಲಿ ತಲ್ಲೀನರಾಗಿ ನಗುತ್ತ ಚಾಪ್ಪಾಲೆ ತಟ್ಟುತ್ತ ಕೆಲವೊಮ್ಮೆ ಕುಣಿದಾಡುತ್ತ ಸಂತೋಷದ ಸುಂದರ ಪ್ರಪಂಚವನ್ನು ತಮ್ಮದಾಗಿಸಿಕೊಂಡಿದ್ದರು..ಈ ದಿನದ ನಿರೀಕ್ಷೆ ಆ ಮಕ್ಕಳಿಗಿತ್ತೆ ಎಂಬುದು ತಿಳಿಯದು ಅವರೆಲ್ಲ ಸಮಾಜದಲ್ಲಿ ಮಾನವರೆಂದು ತಿಳಿದ ನನ್ನಂತವರ ನಡುವೇ ಇದ್ದು ಅನಾಥರೆಂದೆನಿಸಿಕೊಂಡವರು ಆ ಮಕ್ಕಳ ಸಂತೋಷವನ್ನು ನಗುವನ್ನು ಕಂಡು ನಾನು ನನ್ನ ಸ್ನೇಹಿತರು ನಮ್ಮ ನಮ್ಮ ಮುಖವನ್ನು ಒಮ್ಮೆ ನೋಡಿ ನಗೆ ಬಿರಿದೇವು ನನ್ನಲ್ಲಿ ಜೀವನದ ಸಾರ್ಥಕ ಭಾವವೊಂದು ಮೂಡುತ್ತಿದ್ದಂತೆ ಪಿಳ್ಳಂಗೋವಿಯ ಚೆಲುವ ಕೃಷ್ಣನನ್ನು ಎಲ್ಲಿ ನೋಡಿದಿರಿ ಗಾನದ ಸೋನಿ ಏರಿಕ್ಸನ್ ಮೋಬೈಲನ ಎಲರಂ ಸರಿಯಾಗಿ ಐದು ಘಂಟೆಗೆ ಮೊಳಗಿತ್ತು ನಿದ್ರೆಯಿಂದ ಎದ್ದು ಕುಳಿತು ಗಾಢವಾಗಿ ನಿಟ್ಟುಸಿರುಬಿಟ್ಟು ಯೋಚಿಸಿದೆ ನನಸಾದೀತೆ ಈ ಕನಸು ನಾಳೆಯಾದರು ನನಗೆ ಸಿಗುವುದು ಎಂದಿದ್ದ ಕೆಲಸದ ಸುದ್ದಿ ಬಂದಿತ್ತೆ ಆದಾಗಲೇ ನಾಲ್ಕು ತಿಂಗಳಾಗುತ್ತ ಬಂದಿತ್ತು ಪ್ರೈವೇಟ್ ಭ್ಯಾಂಕಿನ ಆಫೀಸರ್ ಹುದ್ದೆಯನ್ನು ನನ್ನದೆ ಬುಡಾಯದ ವಾದವನ್ನು ಮಂಡಿಸಿ ಬಿಟ್ಟು ಬಂದು ನನ್ನದೆ ಆರ್ಥಿಕ ಸ್ವಾತಂತ್ರದ ಬಗ್ಗೆ ಆಲೋಚಿಸುತ್ತಿದೆ ಅಂಥದರಲ್ಲಿ ಈ ಕನಸು ನನಸಾದೀತೆ ಮನಸ್ಸಿನಲ್ಲಿ ಮುಂದೇನು ಎಂಬ ಭಯ ಮೇಲ್ಲನೆ ಅವರಿಸುತಿತ್ತು ನಾನು ನನ್ನ ಕೆಲಸದ ಹುಡುಕಾಟವನ್ನು ಮುಂದುವರಿಸುತ್ತಿದ್ದೇನೆಯೇ ಅಥವಾ ಕೇವಲ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿದ್ದೇನೆಯೆ? ಏನು ಪ್ರಯತ್ನ ಮಾಡದೆ ದೇವರಲ್ಲಿ ನನ್ನನು ಸಲಹು ಎಂದು ಕೇಳಿಕೊಳ್ಳುತ್ತಿದ್ದೆನೇ ಒಂದೋ ತಿಳಿಯದಾಗಿತ್ತು. ಮನಸ್ಸಿಗೆ ಸಾಂತ್ವನ ಕೊಡುವ ಉತ್ತರವೆಂಬಂತೆ ಹೇಳಿದ ನಿರೇಕ್ಷೆ ಮತ್ತು ಪ್ರಯತ್ನ ಒಟ್ಟಗಿ ಸಾಗುತ್ತಿದೆ ಪ್ರಯತ್ನವನ್ನು ಮುಂದುವರಿಸಿದರೆ ಸಫಲತೆ ಖಂಡಿತ ದೋರಕುತ್ತದೆ.
ಆದರೆ ಈ ಕನಸು ನನಸಾದೀತೆ ಇನ್ನೊಮ್ಮೆ ನನ್ನನ್ನೆ ಪ್ರಶ್ನೆಸಿದೆ ನನ್ನನ್ನೆ ಅಣುಕಿಸುವಂತೆ ಮನಸ್ಸಿನ ಮೊಲೆಯಿಂದ ಇನ್ನೊಂದು ಪ್ರಶ್ನೆ ನೆನಪಿದ್ದಿತೇ ಈ ಕನಸು ? ಆಂದು ಕಷ್ಟಪಟ್ಟು ಆಫೀಸರ್ ಹುದ್ದೆಗೆ ಏರಿದ ಮೇಲೆ ನನ್ನ ಯೋಚನೆಗಳು ಈ ಮಕ್ಕಳ ಬಗ್ಗೆ ಏಕೆ ಇರಲಿಲ್ಲ ನನ್ನದೆ ಸಂತಸದ ಹುಡುಕಾಟದಲ್ಲಿ ಕೋಳ್ಳಬೇಕಿಂದದ್ದು ಬೈಕ್ ಆಮೇಲೆ ಮನೆ ಆಮೇಲೆ ಕಾರು ಆಮೇಲೆ ಬಂಗಲೇ ಆಮೇಲೆ ಬೇಂಜು ಕಾರು ಈ ನನ್ನ ಏರುತ್ತಿದ್ದ ಆಸೆಗಳ ಬೆಟ್ಟವನ್ನು ಹತ್ತಲು ಸುರುಮಾಡಿ ಎಡವಿದೆ ಎಷ್ಟೊಂದು ಸಲ ಚಿತ್ರಮಂದಿರದಲ್ಲಿ ನೋಡಿದ ಚಿತ್ರವನ್ನೆ ಗೆಳೆಯರೊಂದೆಗೆ ನೋಡಲಿಲ್ಲ, ಬ್ರಾಡೆಂಡ್ ಬಟ್ಟೆಗಳನ್ನು ತಂದು ಕಪಾಟಿನಲ್ಲಿ ತುಂಬಿಡಲಿಲ್ಲ, ಐಷಾರಮಿ ಹೋಟೆಲಿನಲ್ಲಿ ತಿಂದು ಕುಡಿದು ನಮ್ಮ ಸಂತೋಷವನ್ನ ಆಚರಿಸಲಿಲ್ಲ ಆಗ ಒಂದು ಸಲವಾದರು ಈ ಮಕ್ಕಳಿಗೆ ಕೊಡಬೇಕಾದ ಸ್ನೇಹ ಪ್ರೀತಿ ಸಂತೋಷದ ನೆನಪಾಗಲಿಲ್ಲವೇಕೆ ನನಗೆ. ಮಾನವತೆಯನ್ನು ಮೆರೆಯಬೇಕಾದಗ ಮರೆತು ಇಲ್ಲದಾಗ ಮಾನವತೆಯ ಬಗೆ ಯೋಚಿಸುತ್ತೆವೆಯೇ ನನ್ನಂತವರು ಸಂತಸದಲ್ಲಿದ್ದಾಗ ದೇವರನ್ನು ಮರೆತು ಕಷ್ಟದಲ್ಲಿ ದೇವರನ್ನು ನೆನೆಯುವುದರ ಅರ್ಥ ಇದೆ ಇರಬೇಕು. ಸಶಕ್ತನಾಗಿದ್ದಾಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಮರೆತು ಕಷ್ಟದಲ್ಲಿದ್ದಾಗ ಒಳ್ಳೆಯ ಕಾರ್ಯದ ಬಗ್ಗೆ ಯೋಚಿಸಿ ಶಕ್ತಿ ಸಾಲದು ಎಂದು ಕೊರಗುತ್ತೇನೆ ನಾನು. ನೆನಪಿದ್ದಿತೇ ಈ ಕನಸ್ಸು ಪ್ರಶ್ನೆ ನನ್ನ ಭಾವನೆಯ ಅಂಧಕಾರಕ್ಕೆ ಹಿಡಿದ ಕನ್ನಡಿ ಎನಿಸಿತ್ತು ಮರೆಯಬಾರದು ಈ ಕನಸನ್ನು ಈ ಕನಸೇ ನನಗೆ ಹೊಸ ಬೆಳಕು.
ಅಸತೋಮ ಸದ್ಗಮಯತಮಸೋಮ ಜೋತಿರ್ಗಮಯಮೃತ್ಯೋಮ ಅಮೃತಾಂಗಮಯ.
ಆಸೆಯಿಂದ ಮುಕ್ತನಾಗಿ ಸತ್ಯದ ಕಡೆಗೆ, ಆಸೆಯಿಂದ ಮುಕ್ತನಾಗಿ ಬೆಳಕಿನ ಕಡೆಗೆ, ಆಸೆಯಿಂದ ಮುಕ್ತನಾಗಿ ತ್ಯಾಗದ ಕಡೆಗೆ. ಆಸೆಯೇ ಕತ್ತಲು, ಆಸೆಯೇ ಮೃತ್ಯು ಜೀವನವೇ ತ್ಯಾಗ ಎಂಬ ಬೆಳಕು ಗೋಚರಿಸುತ್ತಿದಂತೆ ಜೀವನ ಸಾರ್ಥಕದೆಡೆಗೆ ನನ್ನ ಪ್ರಯಾಣ.

ಪ್ರೀತಿ ಹೂ

ನೀನು ನನ್ನ ಸನಿಹದಲ್ಲಿದ್ದಗ ನನ್ನ ಸುತ್ತಲ್ಲಿನ ಬದುಕು ಎಲ್ಲಯೋ ಕಣ್ಮರೆಯಾದಂತೆ ಅನಿಸಿ ಎಲ್ಲಿ ನಿನ್ನ ಕಣ್ಣುಗಳಲ್ಲಿ ನನ್ನ ಬದುಕು ಅಡಗಿದೆಯೋ ಅಂದು ಕೊಂಡು ನಿನ್ನ ಹೊಂಗನಿಸಿನ ಕಣ್ಣುಗಳಲ್ಲಿ ಇಣುಕಿ ನನ್ನ ಪ್ರೀತಿಯ ಬದುಕನ್ನು ನಯನಗಳಿಂದಲೇ ಕರೆದೆ ಆ ಕರೆಗೆ ಭಾವನತ್ಮಕವಾಗಿ ಸ್ಪಂದಿಸಿದ ನಿನ್ನ ಕಣ್ಣುಗಳ ಕಿರು ನೋಟಕ್ಕೆ ಮನಸ್ಸು ತನ್ನ ಇರುವಿಕೆಯ ಮರೆತಿರಲು ಹೃದಯದ ಭಾವನೆಗಳೆಲ್ಲ ಸಂತೋಷದ ಅಲೆಯಾಗಿ ಆ ಅಲೆಗಳೆಲ್ಲ ಮೊಗ್ಗರಳಿ ಹೂ ಆದಂತೆ ನಗುವ ಹೂ ಆಗಿ ನಾ ಮುಗುಳ್ನಕ್ಕೆ ನನ್ನಲ್ಲರಳಿದ ಹೂ ನಗೆಯನ್ನು ಕಂಡು ಕೇಳಿದಿ ಯಾಕೆ ಹರಿ ನಿನ್ನಷ್ಟಕ್ಕೆ ನೀ ನಗುತ್ತಿದ್ದಿಯಾ ನಿನ್ನ ಪ್ರಶ್ನೆಗೆ ಮೌನ ಮಾತುಗಳಲ್ಲಿ ಉತ್ತರಿಸಲಾಗದೆ ಮುಗುಳ್ನಾಕ್ಕೆ. ಆ ದಿನಗಳಲ್ಲಿ ನನ್ನ ಮಾತು ನೀನಾದೆ ,ಮೌನ ನೀನಾದೆ, ಕನಸು ನೀನಾದೆ, ಮನಸು ನೀನಾದೆ, ಹೃದಯ ನೀನಾದೆ, ನನ್ನ ನಗುವ ಪ್ರೀತಿ ಹೂ ನೀನಾದೆ
ಕಣ್ಣುಗಳಲ್ಲಿ ವ್ಯಕ್ತವಾದ ಪ್ರೀತಿಯನ್ನು ಇನ್ನು ಮಾತುಗಳಲ್ಲಿ ನಿವೇದಿಸುವ ಅಗತ್ಯ ಇಲ್ಲವೆನಿಸಿದರು ನಿನ್ನ ಮುಂದೆ ಮಾತಗದೆ ಮೌನವಾಗಿ ನಗುವಾದ ಪ್ರೀತಿಯನ್ನು ಮಾತಾಗಿಸುವ ಹಂಬಲದಿಂದ ನಿನ್ನ ಮನೆಗೆ ಪೋನಾಯಿಸಿದೆ ಪೋನಿನಲ್ಲಿ ನಿನ್ನ ಧ್ವನಿ ಕೇಳುತ್ತಿದಂತೆ ಪ್ರೀತಿ ಮಾತಗಿ ಕವಿತೆಯಾಗಿ ತನ್ನ ಒಲವ ನಿವೇದಿಸುವಂತೆ ಕೇಳಿದೆ ನೀ ನನ್ನ ಪ್ರೀತಿಸ್ತಿಯಾ ? ಹರಿ ನಿನಗೆ ತಲೆ ಕೆಟ್ಟಿದೆಯಾ ಎಂಬ ನಿನ್ನ ಮಾತು ಸಿಡಿಲಬ್ಬರದಂತೆ ಬಂದಾಗ ಪ್ರೀತಿ ಹೂ ಮುದುಡಿ ಮೊಗ್ಗಲ್ಲದ ಮೊಗ್ಗಾಗಿ ಹೃದಯದ ಮಗ್ಗುಲಲ್ಲಿ ನಡುಗಿತ್ತು ಹೃದಯ ಪ್ರೀತಿ ಹೂವಾ ಬಿಗಿದಪ್ಪಿ ತನ್ನ ಮಡಿಲಲ್ಲಿ ಬಚ್ಚಿಟ್ಟಿತ್ತು. ಆ ಕ್ಷಣ ಮುಂಜಾವಿನ ಹೂತ್ತಲ್ಲಿ ಕತ್ತಲು ಕವಿದು ಜೀವನ ಆ ಕತ್ತಲಲ್ಲಿ ದಾರಿ ಕಾಣದೆ ಸ್ತಬ್ದವಾದಂತೆ ನಾನು ಮಾತಿಲ್ಲದೆ ಮೌನಿಯಾದೆ ನನ್ನ ಮೌನಕ್ಕೆ ಪ್ರತಿಯಾಗಿ ಹರಿ ನಿನಗೆ ನಾನು ನಾಳೆ ಪೋನು ಮಾಡುತ್ತೇನೆ ಎಂದಾಗ ಯಾಂತ್ರಿಕಾವಗಿ ರಿಸೀವರ್ ಕೆಳಗಿಟ್ಟೆ. ಹೊರಗಡೆ ನಾನಗಾಗಿ ಕಾಯುತ್ತಿದ್ದ ಸ್ನೇಹಿತನೆಡೆ ಸಾಗಿ ನಗುವಲ್ಲದ ನಗುವಲ್ಲಿ ಕೇಳಿದೆ ನನಗೆ ತಲೆ ಕೆಟ್ಟಿದೆಯೇ ನನ್ನ ಮಾತುಗಳಲ್ಲಿದ್ದ ನೋವು ಅವನಿಗೆ ಅರ್ಥವಾಗಿ ನನ್ನನು ಸಂತೈಸುವಂತೆ ಮುಗುಳ್ನಕ್ಕ .
ಮನಸ್ಸಿನಲ್ಲಿ ಧುಮ್ಮಿಕ್ಕುವ ಜಲಪಾತದಂತೆ ಪ್ರಶ್ನೆಗಳ ಮೇಲೊಂದು ಪ್ರಶ್ನೆಗಳು ನಿನಗೆ ನನ್ನ ಕಣ್ಣುಗಳ ಪ್ರೀತಿಯಾ ನಿವೇದನೆ ಅರ್ಥವಾಗಲಿಲ್ಲವೇ ? ಅಲ್ಲಿ ವ್ಯಕ್ತವಾದ ಪ್ರೀತಿ ನಿನಗೆ ಕಾಣದೆ ಮರೆಯಾಯಿತೆ ? ನನ್ನ ನಗುವಲ್ಲಿ ಮೊಡಿದ ಪ್ರೀತಿಯ ಹೂ ನಗು ಬರಿಯಾ ನಗುವಾಯಿತೆ ನಿನಗೆ ? ನಿನ್ನ ಕಣ್ಣುಗಳ ಕಿರು ನೋಟಕ್ಕೆ ಇನ್ಯಾವ ಅರ್ಥವಿದ್ದಿತು ? ನಾನು ನನ್ನ ಸ್ನೇಹಿತೆಯೊಂದಿಗೆ ಮಾತಾಡಿದಾಗ ನಿನಗಾದ ಮತ್ಸರಕ್ಕೆ ಬೇರೆಯೇ ಕಾರಣಗಳಿದ್ದವೇ ? ನಿನ್ನ ಆಡಿಟ್ ಪುಸ್ತಕದ ಬದಲಾಗಿ ನಾನು ಕೊಟ್ಟ ನನ್ನ ಆಡಿಟ ಪುಸ್ತಕದ ಮೊದಲ ಪುಟದಲ್ಲಿ ಚಿತ್ರಿಸಿದ ಪ್ರೀತಿ ಹೂವಿನ ಬಣ್ಣದಲ್ಲಿ ನನ್ನ ಒಲವಿನ ನಿವೇದನೆ ನಿನಗೆ ತಿಳಿಯಲಿಲ್ಲವೇ ? ನನ್ನ ಪ್ರೀತಿಯಾ ವೋಚರ್ ನಿನ್ನ ಹೃದಯ ಎಂಬ ಆಕೌಂಟ್ ನಲ್ಲಿ ಎಂಟ್ರಿ ಆಗದೆ ನಿನ್ನ ಪ್ರೀತಿಯಾ ಆಡಿಟ್ ಸ್ಟಾಂರ್ಡಡಿಗು ಸಿಗದೆ ಕಳೆದು ಹೊಯಿತೆ ? ಇಲ್ಲ ಹಾಗಿರಲಾರದು ನಿನ್ನ ಮಾತುಗಳಿಗೆ ಬೇರೆ ಕಾರಣಗಳಿರಬಹುದು ಹೇಗೂ ನಾಳೆ ಪೋನು ಮಾಡುತ್ತಿ ಎಂದಿದ್ದಿಯಾಲ್ಲ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂದು ನಾವು ಕೆಲಸ ಮಾಡುತಿದ್ದ ಆಫೀಸಿಗೆ ಎರಡು ದಿನ ರಾಜೆ ಹಾಕಿ ನಿನ್ನ ಪೋನಿನ ಕರೆಗೆ ನನ್ನ ಕಾಯುವಿಕೆ ವ್ಯರ್ಥವಾಯಿತು, ನಿರ್ವಾಹವಿಲ್ಲದೆ ಮರುದಿನ ಆಫೀಸಿಗೆ ಹಾಜರದೆ ನೀನಾಗಿ ನಿನ್ನ ಮಾತುಗಳಿಗೆ ಉತ್ತರಿಸುವೇ ಎಂದು ಕಾಯುತ್ತಿದ್ದೆ ಅಲ್ಲಿ ನಾವಿಬ್ಬರೆ ಮಾತಡುವ ಅವಕಾಶ ಸಿಗುವುದು ಅಪರೂಪ ಅಂದು ಎನೋ ಅವಕಾಶ ಸಿಕ್ಕಾಗ ನನ್ನ ಬಳಿ ಬಂದು ಕೇಳಿದಿ
ಹರಿ ನೀನು ಹಾಗೇ ಏಕೆ ತಿಳಿದುಕೊಂಡೆ ?
ನನಗೆ ತಲೆ ಕೆಟ್ಟಿದೆಯಲ್ಲ ಅದಕ್ಕೆ ಹಾಗೇ ತಿಳಿದು ಕೊಂಡಿರಬೇಕು,
ಇಲ್ಲ ಹರಿ ಆ ದಿನ ನನ್ನ ಅಣ್ಣ ಫೋನಿನ ಬಳಿ ಇದ್ದ ಎನು ಹೇಳಬೇಕೆಂದು ತಿಳಿಯಾದೆ ಹಾಗೇ ಹೇಳಿದೆ,
ಹೌದು ನಿನ್ನ ನಾಟಕಕ್ಕೆ ನಾನು ನನ್ನನ್ನೆ ಬಲಿ ಕೊಡಬೇಕು
ಹರಿ ನಾನೇನು ಮಾಡಿದೆ ಎಲ್ಲರೊಂದಿಗೆ ನಡೆದುಕೊಂಡಂತೆ ನಿನ್ನಲ್ಲಿ ನಡೆದುಕೊಂಡೆನಲ್ಲ ನೀನು ತಪ್ಪಾಗಿ ತಿಳಿದುಕೊಂಡಿದಿಯಾ
ನಿನ್ನ ಮಾತುಗಳಿಗೆ ಜೊರಾಗಿ ವ್ಯಂಗ್ಯವಾಗಿ ನಗಬೇಕನಿಸಿತ್ತು ಅದರೆ ಅವಕಾಶವಿರಲಿಲ್ಲ ನೀನೇನು ಮಾಡಿದಿ ಎಂದು ನೀನ್ನ ಮನಸ್ಸನ್ನು ಕೇಳು ಉತ್ತರ ಸಿಗಬಹುದು ನನ್ನನ್ನು ಯಾಕೆ ಕೇಳುತ್ತಿ ನಿನಗೆ ಆಟವಾಡಲು ನಾನೇ ಬೇಕಿತ್ತ ಬೇರೆ ಯಾರು ಸಿಗಲಿಲ್ಲವೇ ನೀನಿಲ್ಲದಾಗಲು ನಾನು ಸಂತೋಷವಾಗಿದ್ದೆ ಆ ಸಂತೋಷವನ್ನಾದರು ನಿನಗೆ ಹಿಂದುರುಗಿಸಲಾದಿತ್ತೆ ನನ್ನ ಮಾತಿಗೆ ನೀನು ನಕ್ಕಂತೆ ಭಾಸವಾಯಿತು ನಗಬೇಡ ನೀನು ನಾನೇನು ಇಲ್ಲಿ ತಮಾಷೆ ಮಾಡುತ್ತಿಲ್ಲ
ಇಲ್ಲ ಹರಿ ನಾನು ನಗುತ್ತಿಲ್ಲ ನಾನು ನಿನ್ನೊಂದಿಗೆ ಯಾಕೆ ಆಟವಾಡಲಿ ನೀನೆ ತಪ್ಪಾಗಿ ತಿಳಿದು ಕೊಂಡಿದ್ದಿಯಾ,
ಏನು ತಿಳಿದಿಲ್ಲವೇ ನಿನಗೆ ಮಾತಿನಲ್ಲಿ ಅಸಹನೆಯಿತ್ತು ನನ್ನ ಸಂತೋಷವನ್ನೆಲ್ಲ ನುಂಗಿ ಜಿರ್ಣಿಸಿ ಮಲಗಿದ ಹೆಬ್ಬಾವಿನಂತೆ ಏನು ತಿಳಿಯದು ಎಂದು ನಾಟಕ ಮಾಡಬೇಡ ನೀನು ನಿನ್ನಿಂದಾಗಿ ನಾನು ನಂಬಿಕೆಯಾನ್ನೆ ಕಳೆದು ಕೊಂಡಿದ್ದೇನೆ ನನ್ನ ಆಡಿಟ ಪುಸ್ತಕವನ್ನು ನೀನು ಹಿಂದುರುಗಿಸು ನೀನ್ನಲಿ ಬೇರೆ ಏನು ಮಾತಡಲು ಉಳಿದಿಲ್ಲ ಇಲ್ಲಿಂದ ನೀನು ಹೂಗು.
ಹರಿ ನೀನು ಯಾರನ್ನು ನಂಬುವುದಿಲ್ಲವೇ ಇನ್ನು ,
ನಿನ್ನಿಂದಾಗಿ ನಾನು ಯಾರನ್ನು ನಂಬುವುದಿಲ್ಲವೇಂದು ನಿನಗೆ ಭಯಾವಾಗಿ ಆ ಪ್ರಶ್ನೆಯಾನ್ನು ಕೇಳಿದಿಯಾ ತಿಳಿಯಾದು. ಇಲ್ಲ ನಿನ್ನ ಹಾಗೇ ಎಲ್ಲರು ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡುತ್ತರೆ ಎಂದು ತಿಳಿದಿದ್ದಿಯಾ ಅವರ ಮೇಲೆ ನಾನಿಟ್ಟ ನಂಬಿಕೆಯಾನ್ನು ನಿನ್ನಿಂದಾಗಿ ನಾನು ಯಾಕೆ ಕಳೆದು ಕೊಳ್ಳಲಿ
ಹರಿ ನಾನು ನಿನ್ನೊಂದಿಗೆ ಆಟವಾಡಲಿಲ್ಲ ಹಾಗೇ ತಿಳಿಯಾ ಬೇಡ
ನಿನ್ನೊಂದಿಗೆ ನನಗೆ ಮಾತಾಡಲು ಏನು ಇಲ್ಲ ನನ್ನ ಮುಂದಿನಿಂದ ಹೋಗು ನೀನು ಇಲ್ಲದಿದ್ದರೆ ನಾನು ಸ್ಥಿಮೀತ ಕಳೆದು ಕೊಂಡು ಜೋರಾಗಿ ಅರಚಬೇಕಾದಿತು
ಅಲ್ಲಿಗೆ ನಂಬಿಕೆಯ ಅಡಿಪಾಯ ಕಳಚಿ ಬಿದ್ದ ಪ್ರೀತಿಯ ಗೋಪುರಾದ ಅವಶೇಷಗಳಡಿಯಲ್ಲಿ ಆವರಿಸಿದ ನೀರಾವ ಕತ್ತಲಲ್ಲಿ ಪ್ರೀತಿಯ ಹೂ ವೀಣೆಯಾ ಹಿಡಿದು ಮೀಟಿದ ನೋವಿನ ರಾಗ ತರಂಗಗಳು ಜೀವನದ ಪ್ರತಿ ಕ್ಷಣ ಪ್ರತಿಧ್ವನಿಸುತಿತ್ತು ಮರುದಿನ ನಿನ್ನ ಆಡಿಟ ಪುಸ್ತಕವನ್ನು ನಿನ್ನ ಮೇಜಿನ ಮೇಲೆ ಇಟ್ಟು ಬಂದೆ ನನ್ನ ಆಡಿಟ್ ಪುಸ್ತಕವನ್ನು ನಾಲ್ಕು ದಿನವಾದರು ನೀನು ಹಿಂದುರುಗಿಸಾದಾಗ ನನ್ನಲ್ಲಿ ಪ್ರೀತಿ ಇಲ್ಲದ ಮೇಲೆ ನನ್ನ ಪ್ರೀತಿಯ ಸಂಕೇತವಾದ ನನ್ನ ಪ್ರೀತಿ ಹೂವಿನ ಪುಸ್ತಕವನ್ನು ಹಿಂದುರುಗಿಸದೆ ಇನ್ನು ನನ್ನಲ್ಲಿ ನಿನಗೆ ಪ್ರೀತಿ ಇದೆ ಎಂದು ನಿರೂಪಿಸುವ ಪ್ರಯತ್ನ ಯಾಕೆ ಮಾಡುತ್ತಿರುವೆ ಎಂದು ನನ್ನ ಸ್ನೇಹಿತೆಯಲ್ಲಿ ನಿನ್ನಲ್ಲಿ ಆ ಪುಸ್ತಕವನ್ನು ಹಿಂದುರುಗಿಸಲು ಹೇಳುವಂತೆ ಹೇಳಿದೆ
ಪುಸ್ತಕವನ್ನು ಹಿಂದುರುಗಿಸಲು ಬಂದ ನೀನು ನನ್ನ ಮುಂದೆ ಆ ಪುಸ್ತಕವನ್ನು ಇಟ್ಟು ಹೇಳಿದಿ ಇದನ್ನು ತೆಗೆದು ಕೊಳ್ಳುವ ಮುಂಚೆ ನನ್ನ ಮಾತು ಕೇಳು ಹರಿ ನನಗೆ ಈಗಾಗಲೇ ಹುಡುಗನನ್ನು ಗೊತ್ತು ಮಾಡಿದ್ದರೆ ಈಗ ನೀನು ನನ್ನನು ಕಳೆದು ಕೊಂಡರೆ ಒಂದು ಒಳ್ಳೆಯ ಸ್ನೇಹಿತೆಯನ್ನು ಕಳೆದು ಕೊಳ್ಳುತ್ತಿಯ ನನಗೆ ನಿನ್ನ ಮಾತುಗಳಲ್ಲಿ ನಂಬಿಕೆ ಇರಲಿಲ್ಲ ಆದರೆ ನಿನ್ನ ಕಣ್ಣುಗಳಲ್ಲಿ ಕಂಬನಿ ಹರಿದಾಗ ಪ್ರೀತಿ ಮರುಗಿ ನನ್ನ ಕತ್ತಲ ಬದುಕಲ್ಲಿ ನಿನ್ನ ಸ್ನೇಹದ ಹಣತೆ ಆದರೂ ಬೆಳಗಳಿ ಎಂಬಂತೆ ಹೇಳಿದೆ ನೀನು ಬೇಕದರೆ ನನ್ನನು ಸ್ನೇಹಿತನೆಂದು ತಿಳಿದುಕೊ ಆದರೆ ನಾನು ನಿನ್ನನು ನೋಡುವುದು ಆ ಮಧುರ ಪ್ರೀತಿಯಾ ಭಾವನೆಗಳಿಂದಲೇ. ಪುಸ್ತಕವನ್ನು ಮರಳಿ ತೆಗೆದು ಕೊಳ್ಳಲೇ ಎಂದು ನೀ ಕೇಳಿದಾಗ ಆಯಿತು ಎಂಬಂತೆ ವಿಷಾದ ಸಂತೋಷ ಎರಡು ಭಾವನೆಗಳು ಒಂದಾದಂತೆ ಮುಗುಳ್ನಾಗುತ್ತ ತಲೆ ಅಲ್ಲಡಿಸಿದೆ
ಆಮೇಲೆ ನಿನ್ನ ಭಾವನೆಗಳಲ್ಲಿ ಸ್ನೇಹದಲ್ಲಿ ಇರಬೇಕಾದ ನಂಬಿಕೆ ಪ್ರೀತಿ ಇರದೆ ಸ್ನೇಹದ ಮುಸುಕಲ್ಲಿ ನೀ ಪ್ರಕಟಿಸಿದ ಪ್ರೀತಿ, ಪ್ರೀತಿಯ ಅಣಕು ಪ್ರದರ್ಶನದಂತೆ ಕಂಡಿತು. ನಿನನ್ನು ನಾನು ಪ್ರೀತಿಸಿದ ದಿನಗಳೆಲ್ಲ ಸುಂದರ ನಿನ್ನಲ್ಲಿ ಪ್ರೀತಿಯನ್ನು ಹುಡುಕಿದ ದಿನಗಳೆಲ್ಲಿ ನೋವು ನಿರಾಶೆ ಹತಾಶೆ ಆ ಹತಾಶೆಯಲ್ಲಿ ನಿನ್ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಿನ್ನಿಂದ ಹಾರಿಕೆಯ ಅಥವಾ ಸುಳ್ಳಿನ ಉತ್ತರ ನಿನಗೆ ಹುಡುಗನನ್ನು ಗೊತ್ತು ಮಾಡಿದ ವಿಷಯ ನೀನು ನನ್ನನು ಸಂತೈಸಲು ಹೇಳಿದ ಒಂದು ಸುಳ್ಳೆ ಆಗಿರಬೇಕೆಂದು ಅನಿಸಿ ನಾನು ನೀನು ಬಿಡಿಸಿದ ವ್ಯಂಗ್ಯ ಚಿತ್ರವಾಗಿ ಆ ವ್ಯಂಗ್ಯ ಚಿತ್ರವನ್ನು ನೋಡಿ ನೀನು ನಕ್ಕಂತೆ.ನಾನು ಸಭ್ಯತೆಯನ್ನು ಕಳೆದು ಕೊಂಡು ನಿನ್ನ ಪ್ರೀತಿಯ ಅಣಕು ಪ್ರದರ್ಶನವನ್ನು ಬಯಲುಗೊಳಿಸುವ ಪತ್ತೆದಾರನಂತೆ ವರ್ತಿಸಿದೆ ನಿನಗೆ ನನ್ನಲ್ಲಿ ಇದ್ದು ಇಲ್ಲದ ನಂಬಿಕೆ ನನಗೆ ನಿನ್ನಲ್ಲಿ ಕಳೆದುಕೊಂಡ ನಂಬಿಕೆ ಬಲಗೊಂಡು ಮಾತು ಜಗಳವಾಗಿ ಜಗಳ ಮಾತಿಲ್ಲದೆ ಮೌನವಾಗಿ ಮೌನದಲ್ಲಿ ನೀ ನೆನಪಾಗಿ ಪ್ರೀತಿಗಾಗಿ ಕ್ಷಮೆ ಕೋರಿ ನೀನು ನನಗಾಗಿ ಪ್ರೀತಿಯ ಬದಲಾಗಿ ಕರುಣೆ ತೋರಿ ಮತ್ತೆ ನಗು ಪ್ರೀತಿ ಸ್ನೇಹ ಮಾತು. ದಿನಕಳೆದಂತೆ ಪ್ರೀತಿ ನಗು ಮಾತು ನಂಬಿಕೆ ಜಗಳ ಮೌನ ಪುನರ್ವತಿಸದಂತೆ ನನ್ನಲ್ಲಿ ನಿನಗೆ ಇರುವ ಪ್ರೀತಿಯನ್ನು ನಿರೂಪಿಸಲು ಇರುವ ಉತ್ತರವೆಂದು ನನ್ನ ಪ್ರೀತಿಯ ಭಾವನೆಗಾಳಗಿ ನಿನ್ನಲ್ಲಿರುವ ನನ್ನ ಪ್ರೀತಿ ಹೂವಿನ ಆಡಿಟ್ ಪುಸ್ತಕನ್ನು ಹಿಂದುರುಗಿಸುವಂತೆ ಹೇಳಿದೆ ಈ ಸಾರಿ ಏನು ಹೇಳದೆ ಮೌನದಲ್ಲಿ ನೀನು ಪುಸ್ತಕವನ್ನು ಹಿಂದುರುಗಿಸಿದಾಗ ಹರಿ ನಿನಗಾಗಿ ನಾನಿಲ್ಲ ಎಂಬ ಉತ್ತರವನ್ನು ನಿನ್ನ ಮೌನ ಯಾವ ಭಾವನೆಗಳು ಇಲ್ಲದೆ ಉತ್ತರಿಸಿದಂತೆ ಇತ್ತು. ನಿನಗಾಗಿಯೇ ನಾನಿದ್ದೆ ನಿನ್ನ ನಗುವಲ್ಲಿ ನಾ ನಗುತಿದ್ದೆ ನಿನಗಾಗಿ ನನ್ನೊಳಗೆ ಪ್ರೀತಿ ಹೂವಾಗಿ ನಗುವಾಗಿ ಅರಳಿ ನನ್ನೊಳಗೆ ಮಾತಾಗಿ ಕವಿತೆಯಾಗಿ ಕೊನೆಗು ನೀನಿಲ್ಲದೆ ನನ್ನೊಳಗೆ ನಗು ಅಳುವಾಗಿ ಆಕಾಶದಿಂದ ಸುರಿದ ಮಳೆ ಮೊಗ್ಗಲ್ಲದ ಮೊಗ್ಗಗಿ ಮುದುಡಿದ ಪ್ರೀತಿ ಹೂವಿನಲ್ಲಿ ಇಬ್ಬನಿಯಾಗಿ ಸಂತೈಸಿ ಪ್ರೀತಿ ಹೂ ಆ ಇಬ್ಬನಿಯಲ್ಲಿ ತೋಯ್ದು ಧರೆಗುರುಳಿಸಿದ್ದ ಹನಿಗಳಂತೆ ಕಂಬನಿ ನನ್ನ ಕಣ್ಣುಗಳಲ್ಲಿ ಹರಿದಿತ್ತು.
ನಂತರ ಕೆಲವು ತಿಂಗಳುಗಳ ಮೌನ ಮುರಿದು ನೀ ಮಾತಾಡಿದಾಗ ನೀನು ದೂರದ ಬೆಂಗಳೂರಿಗೆ ಹೊರಟ್ಟು ನಿಂತಿದ್ದೆ .ನನಗಾಗಿ ನಿನ್ನ ಪ್ರೀತಿಯ ನಿರೀಕ್ಷೆಯನ್ನು ಬಿಟ್ಟು. ನಾ ನಿನ್ನೊಂದಿಗೆ ಇರಬೇಕೆಂದಿದ್ದೆ ಜೀವನದ ಪ್ರತಿ ಕ್ಷಣದಲ್ಲು ಆದರೆ ನೀನು ನನ್ನೊಂದಿಗೆ ಇರಬೇಕೆಂದಿದ್ದೆ ಜೀವನದ ಕೇಲವು ಮೀಸಾಲಿಟ್ಟ ಕ್ಷಣಗಳಲ್ಲಿ. ಜೀವನದ ಮುಂದಿನ ದಿನಗಳಲ್ಲಿ ನೀನು ನನ್ನೊಂದಿಗೆ ಇಲ್ಲವಾಗುವ ಕ್ಷಣದ ಭಯದಲ್ಲಿ ನಾ ನೀ ಹೇಳಿದ ಮಾತು ಸತ್ಯವಾದಂತೆ ನಿಜವಾಗಿ ತಲೆಕೆಟ್ಟು ಮಾಡಿದ ಅನಂತ ಕರೆಗಳು ನಿನಗೆ ನಿನ್ನ ಜೀವನಾದ ಮುಂದಿನ ದಿನಗಳಿಗೆ ನಾ ಮುಳ್ಳಾಗುವ ಭಯ ಹುಟ್ಟಿಸಿತೇನು ಅದಕ್ಕಾಗಿಯೇ ಇರಬೇಕು ನಿನ್ನ ಮೀಸಲು ಕ್ಷಣಗಳು ನನಗಾಗಿ ಇಲ್ಲದಂತಾದುದು ನಿನಗೆ ಎಲ್ಲಿ ತಿಳಿದಿತ್ತು ನಿನ್ನ ನಗುವಲ್ಲಿ ನಾ ನಗುತ್ತಿದ್ದೆ ಎಂದು ನನ್ನ ನೀರಿಕ್ಷೆ ನಿನಗಿಲ್ಲದ ಮೇಲೆ ನಿನ್ನಲ್ಲಿ ಮಾತಿಲ್ಲದೆ ನಿನ್ನಿಲ್ಲದ ನನ್ನ ಜೀವನದ ಹಾದಿಯಲ್ಲಿ ನಾನಿದ್ದಗ ನೀನು ಮತ್ತೆ ಕರೆ ಮಾಡಿದಾಗ ಇನ್ನು ನಿನಗೆ ನನ್ನಲ್ಲಿ ನಿರೂಪಿಸಲು ಯಾವ ಭಾವ ಅಡಗಿದೆ ಎಂದು ತಿಳಿಯಾದೆ ನನ್ನ ನಿರ್ಧಾರವೆಂದು ಹೇಳಿದೆ ನನಗೆ ನೀನು ಕರೆಮಾಡಬೇಡ ನೀನು ಸುಖವಾಗಿರು ನಮ್ಮಿಬ್ಬರ ಬಿನ್ನಾಭಿಪ್ರಾಯಗಳು ಸರಿಹೊಂದಲಾರವು. ಮುಂದಿನ ದಿನಗಳಲ್ಲಿ ನಿನ್ನ ಮರೆಯಲು ಪ್ರಯತ್ನಿಸಿ ಸೋತು ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ ದಿನಗಳು ತಿಂಗಾಳಾಗಿ ತಿಂಗಳುಗಳು ವರುಷವಾಗಿರಲು ಹೃದಯದಲ್ಲಿ ಏನು ತಳಮಳವಾಗಿ ನಿನ್ನ ಪೋನ ನಂಬರಿಗೆ ತಡಕಾಡಿ ಮಾಡಿದ ಕರೆಗೆ ನನ್ನ ತಳಮಳಕ್ಕೆ ಸಾಕ್ಷಿ ಎಂಬಂತೆ ನಿನ್ನ ಒಲವಿನ ಕರೆಗಾಗಿ ಕಾಯುತಿದ್ದ ನನಗೆ ನಿನ್ನ ಮದುವೆಯ ಕರೆ ಒಲೆಯನ್ನು ಕಳಿಸುತ್ತೇನೆ ಎಂದಿದ್ದಿ. ನಿನ್ನ ಬಾಳು ಸುಖವಾಗಿರಲೆಂದು ಹೃದಯ ಪೂರ್ವಕಾವಾಗಿ ಮನಸ್ಸಿನಲ್ಲೆ ಹರಸಿದ್ದೆ . ನಿನ್ನಿಂದ ಯಾವ ನಿರೀಕ್ಷೇ ಗಳಿಲ್ಲದೆ ನಿನ್ನ ಪ್ರೀತಿಗಾಗಿ ನಿರೀಕ್ಷೀಸುವುದೆ ಪ್ರೀತಿ ಎಂದು ಆಗ ತಿಳಿದಿತ್ತು. ಆ ದಿನ ನನ್ನಲ್ಲಿ ನಿನ್ನ ಪ್ರೀತಿಯ ನಿರೀಕ್ಷೆಯನ್ನೆ ಕೊನೆಗೊಳಿಸಿ ನನಾಗಾಗಿ ನೀನು ಇನ್ನೆಂದೂ ಉತ್ತರಿಸಾದ ಪ್ರಶ್ನೆಯನ್ನು ಬಿಟ್ಟು ದೂರ ಸಾಗಿದ್ದಿ.
ನಿನೆಂದೂ ನನ್ನನು ಪ್ರೀತಿಸಲಿಲ್ಲವೇ ? ಈ ಪ್ರಶ್ನೆಗೆ ನೀನು ಎಂದೂ ಉತ್ತರಿಸಾಲಾರೆ ಅಲ್ಲ ಅದಕ್ಕಾಗಿ ಮನುಸ್ಸು ಕಂಡು ಕೊಂಡ ಉತ್ತರ ಇಲ್ಲ ಹಾಗದರೆ ನಿನ್ನ ಕಣ್ಣಲ್ಲಿ ನಾನು ಕಂಡ ಪ್ರೀತಿ ಯಾವುದು? ನನ್ನದೆ ಪ್ರೀತಿ ಕನ್ನಡಿಯಂತಾದ ನಿನ್ನ ಕಣ್ಣುಗಳಲ್ಲಿ ಪ್ರತಿಫಲನಗೊಂಡು ನಾನು ಆ ಪ್ರತಿಫಲನಗೊಂಡ ಪ್ರೀತಿಯಾನ್ನು ಕಂಡು ನನ್ನಗಾಗಿ ನಿನ್ನಲ್ಲರಳಿದ ಪ್ರೀತಿಯೆಂದು ಭ್ರಮಿತನಾಗಿರ ಬೇಕು. ಸುತ್ತಲ್ಲಿನ ಬದುಕು ಪ್ರೀತಿಯಾ ಪರ್ವತದಂತೆ ಅವರಿಸಿದ ಆ ದಿನಗಳಲ್ಲಿ ನನ್ನದೆ ಪ್ರೀತಿಯಾ ಮಾತುಗಳು ನಿನ್ನ ಮಾತುಗಳಲ್ಲಿ ಪ್ರತಿಧ್ವನಿಸಿ ನನಗೆ ಪ್ರೀತಿಯಾ ಕವಿತೆಯಾಗಿ ಕೇಳಿಸಿರ ಬೇಕು.
ನೀನು ನನ್ನನು ಪ್ರೀತಿಸುವೆಯಾ ಎಂದು ಕೇಳಿ ತಪ್ಪು ಮಾಡಿದೆ ಅನಿಸಿತ್ತು ನಿನ್ನ ಪ್ರೀತಿಯನ್ನು ಕೇಳದೆ ನಾನು ನಿನ್ನನು ಪ್ರೀತಿಸಿದ ದಿನಗಳೆಲ್ಲ ಎಷ್ಟು ಸುಂದರವಾಗಿತ್ತು ನನ್ನಲ್ಲಿ ನಿನಗಾಗಿ ಅರಳಿದ ಆ ಮಧುರ ಪ್ರೀತಿಯನ್ನು ಕಂಡು ನೀನು ಎಷ್ಟುಂದೂ ಸಂತೋಷವಾಗಿದ್ದಿ ಆ ನನ್ನೊಳಗಿನ ಪ್ರೀತಿಯನ್ನೆ ಇರ ಬೇಕು ನೀನು ನಿನ್ನ ಕಣ್ಣುಗಳ ಕಿರು ನೋಟದಿಂದ ನೋಡಿದ್ದು.
ನಿನಗಾಗಿ ನನ್ನಲರಳಿದ ಹೂ ನಗೆಯನ್ನು ಕಂಡು ಆ ನಗು ನಿನಾಗಾಗಿಯೇ ಎಂದು ತಿಳಿದು ಪ್ರೀತಿಗಿಂತ ಹೆಚ್ಚಾಗಿ ನಿನಗಾಗಿ ಆ ನಗು ಎಂಬ ಭಾವಕ್ಕೆ ಮರುಳಾಗಿ ನನ್ನೊಂದಿಗೆ ಸುಂದರವಾದ ಆ ಕೆಲವು ಕ್ಷಣಗಳನ್ನು ಕಳೆಯಲು ಬಯಸಿರಾ ಬೇಕು. ನಿನ್ನಲ್ಲಿ ನನಗಾಗಿ ಪ್ರೀತಿಯ ಹೂ ನಗು ಇರಲಿಲ್ಲಿ ನಿನ್ನಲಿಲ್ಲದ ಪ್ರೀತಿಯನ್ನು ಹೇಗೆ ತಾನೇ ನೀನು ಕೊಡಲಾದೀತು ಅದಕ್ಕಾಗಿ ನನ್ನ ಪ್ರೀತಿಗೆ ಬದಲಾಗಿ ಕರುಣೆ ತೋರಿದ್ದು ಕರುಣೆ ಪ್ರೀತಿಗೆ ಸರಿಸಾಟಿ ಆಗದು ಎಂದು ನಿನ್ನಗೆಲ್ಲಿ ತಿಳಿದಿತ್ತು ಪಾಪ ನನ್ನಲ್ಲಿ ನಿನ್ನಗಾಗಿ ಇದ್ದ ಆ ಅಷ್ಟೂಂದು ಮಧೂರ ಪ್ರೀತಿ ನಿನಾಗಗಿ ಇರಲಿ ಎಂದು ನೀನು ಆ ದಿನಗಳಲ್ಲಿ ಆಶಿಸಿದ್ದು ಅದೇ ನನಗೆ ಪ್ರೀತಿಯಾ ಅಣಕು ಪ್ರದರ್ಶನದಂತೆ ಕಂಡದ್ದು.
ಇಷ್ಟೆಲ್ಲ ಮನಸ್ಸು ಹೇಳಿದ ಮೇಲು ಹೃದಯ ಹೇಳಿತ್ತು ನೀನು ನನ್ನನು ಪ್ರೀತಿಸಿದೆ ಹೇಳಾಲಾಗದೆ ಮನಸ್ಸು ತಮಾಷೆ ಎಂಬಂತೆ ನಗುತ್ತ ಹೃದಯಕ್ಕೆ ಹೇಳಿತು ನಿನಗೆ ತಲೆಕೆಟ್ಟಿದೆಯೇ ಆ ಮಾತಿಗೆ ಹೃದಯದಲೊಂದು ನಗು. ಈಗ ನಿನ್ನಿಲ್ಲದೆ ಅಂದಿನ ನಾನು ಕಥೆಯಾಗಿದ್ದೇನೆ ಈ ಸುಂದರವಾದ ನನ್ನ ಭಾವನೆಗಳ ಪ್ರಪಂಚದಲ್ಲಿ ಪ್ರೀತಿ ಹೂ ಇಂದು ನಗುವಾ ಹೂವಾಗಿ ಪ್ರಯಾಣೆಸುತ್ತಿದೆ.
ಇತೀ ನಿನ್ನ ಪ್ರೀತಿಯ
ಪ್ರೀತಿ ಹೂ

ಐಕ್ಯ

ಕತ್ತಲು ಕವಿದಾಗ
ಬೆಳಕ ಹುಡುಕಿದೆ
ಬೆಳಕು ಹರಿದಾಗ
ಅಂತರ್ಯ ಹುಡುಕಿದೆ
ಅಂತರ್ಯದಲ್ಲಿ ಶ್ರೀ ಹರಿಯ ಕಂಡಾಗ
ನನ್ನ ಹುಡುಕಿದೆ
ನಾನು ಮರೆಯಾಗಿ
ಶ್ರೀ ಹರಿಯು ನಾನಾದೆ

ಕತ್ತಲ ಕಳೆದಾಗ

ಕತ್ತಲಾಚೆಯ ಬೆಳಕ
ಕತ್ತಲಲ್ಲೆ ಹುಡುಕುತ್ತಿದ್ದೆ ನಾನು
ಗುರುಗಳೆಂದರು ಲೋ ಮಂಕೆ
ಕತ್ತಲಾಚೆಯ ಬೆಳಕ
ಕತ್ತಲಾಲ್ಲೆ ಹುಡುಕಿದರೆ ಸಿಕ್ಕಿತೆ ಬೆಳಕು
ಕತ್ತಲ ಬಿಟ್ಟು ನಡೆ ಮುಂದೆ
ಸಿಕ್ಕಿತೂ ಬೆಳಕು
ನಾನೆಂದೆ ಗುರುಗಳೇ
ಕತ್ತಲಾಚೆ ನಡೆದಂತೆ ಇನ್ನು ಘೋರ ಕತ್ತಲು
ಅದಕ್ಕೆ ಭಯದಿ ಅಲ್ಲೆ ನಿಂತೆ
ಇದ್ದಿತೇ ಇನ್ನು ಆಚೆ ಬೆಳಕು
ಗುರುಗಳೆಂದರು ಮಗುವೆ
ಘೋರ ಕತ್ತಲೆಂದು ಹೆದರದಿರು
ನಡೆ ಮುಂದೆ ಸಿಕ್ಕಿತೂ ಸಣ್ಣ ಬೆಳಕು
ಮುಂದೆ ದಾರಿ ತೋರುವುದು ಪೊರ್ಣ ಬೆಳಕಿನೆಡೆಗೆ
ಹೌದೆ ಗುರುಗಳೇ ನನ್ನದೊಂದು ಪ್ರಶ್ನೆ
ಕತ್ತಲಲ್ಲಿ ಇಲ್ಲದ್ದು ಬೆಳಕಲಿ ಇನ್ನೆನೀದ್ದಿತ್ತು
ಗುರುಗಳೆಂದರು ಲೋ ಮರುಳೆ
ಬೆಳಕಿದ್ದಾಗ ಗೊತ್ತಾದಿತ್ತು ಕತ್ತಲ್ಯಾವುದೆಂದು
ಮನಸು ಮತ್ತೆ ಬಯಸದು
ಕತ್ತಲ ಎಂದೂ.

ಸಂತೋಷದ ಹಸಿರು.

ಓಡುತ್ತಿಹರು ಇವರು ಎಲ್ಲಿಗೆ
ಗುರಿಯಿಲ್ಲದೆಡೆ ನಿಲ್ಲದೆ
ಇವರು ಓಡುವ ರಭಸಕ್ಕೆ
ನಲುಗಿವುದು ನಿಸರ್ಗ
ಮೌಢ್ಯ ಕವಿದಿದೆ ಇವರಿಗೆ
ಒಮ್ಮೆ ನಿಂತು ಹಸಿರ ನೋಡಿದರೆ
ಸಿಗದೆ ಸಂತೋಷ
ತಡವಾದಿತ್ತು ಇನ್ನು ಇವರು ನಿಂತಾಗ
ಬರಿದಾದಿತ್ತು ಹಸಿರು ಬರಡಾದಿತ್ತು ಭೂಮಿ
ಇವರ ಓಡುವ ಚಟಕ್ಕೆ
ಕಳೆದುಕೊಂಡರಿವರು ಸಂತೋಷದ ಹಸಿರು.

ನಮ್ಮನ್ನಗಲಿದ ದೇಶ ಪ್ರೇಮಿಗಳಿಗೆ

ಸತ್ಯ ನಿನ್ನದು ನೀತಿ ನಿನ್ನದು
ನ್ಯಾಯ ನಿನ್ನದು ಧರ್ಮ ನಿನ್ನದು
ನಡೆ ನಿನ್ನದು ನುಡಿ ನಿನ್ನದು
ಬೆಳಗು ನೀ ಕ್ರಾಂತಿಯ
ದೇಶ ಬಯಸಿದೆ ಕ್ರಾಂತಿಯ
ತನು ನಿನ್ನದು ಮನ ನಿನ್ನದು
ಹೃದಯ ನಿನ್ನದು ಪ್ರೀತಿ ನಿನ್ನದು
ಒಲವು ನಿನ್ನ ಈ ದೇಶವು
ದೇಶ ಬಯಸಿದೆ ನಿನ್ನನು
ಮರಳಿ ಬಾ ನಾಡಿಗೆ
ಈ ದೇಶ ನಿನ್ನದು

Tuesday, August 18, 2009

MY FIRST CRY

15th May 1979 they said i cried for the first time then i didnt know why now i think may be because life had stored its smile as a gift for me in future