ಭಾರತ್ ಮಹಲ್ ಮಂಗಳೂರಿನ ಮೊದಲ ಆಧುನಿಕ ಸುಸಜ್ಜಿತ ಚಿತ್ರಮಂದಿರವನ್ನು ಹೊಂದಿದ ವ್ಯವಸ್ಥಿತವಾದ ಶಾಪಿಂಗ್ ಮಹಲ್ ಅಂದು ಎನೋ ಹೊಸ ಬೆಳಕು ಹರಡಿದಂತೆ ಮನೋಹರವಾಗಿ ಕಾಣುತಿತ್ತು ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿ ತನ್ನನು ತಾನೇ ಸಿಂಗಾರಿಸಿ ಕಾಯುವಂತೆ ಇತ್ತು ಅಲ್ಲಿನ ವಾತವರಣ. ಬಂಗಾರ ದಿನದ ಗುಂಗಿನಲ್ಲಿ ಮುಳುಗಿ ತಮ್ಮದೆ ಆಕಾಶ ಲೋಕದಲ್ಲಿ ವಿಹರಿಸುತ್ತಿದ್ದ ಹುಡುಗ ಹುಡಿಗಿಯರು, ಹೊಸ ಜೀವನದ ಬದುಕಿಗೆ ನವೀನ ಬಣ್ಣಗಳನ್ನ ಅರಸುತ್ತಿರುವ ನವ ದಂಪತಿಗಳು, ಧೈನಂದಿನ ಕಾರ್ಯಗಳಿಂದ ಮುಕ್ತರಾಗಿ ಸಂಸಾರದೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಬಂದ ಸಂಸಾರಿಗಳು, ಆಟದ ಪಾರ್ಕಿನಲ್ಲಿ ತಮ್ಮದೆ ಮುಗ್ದ ಪ್ರಪಂಚವನ್ನು ಸೃಷ್ಟಿಸಿದ್ದ ಮಕ್ಕಳು ಅಲ್ಲಿನ ಈ ಯಾವ ಚಟುವಟಿಕೆಯು ಆ ನಿರೀಕ್ಷೆಗೆ ಕಾರಣವಗಿರಲಿಲ್ಲ.
ಕೆಳಗಿನ ಮಹಡಿಯಲ್ಲಿ ಶ್ರೀಮಂತ ಕಾನ್ವೆಂಟು ಶಾಲೆಯ ಮಕ್ಕಳಂತೆ ನೀಟಾಗಿ ತಲೆ ಬಾಚಿ ಬಿಳಿಯ ಅಂಗಿ ಅದರ ಮೇಲೆ ಕಪ್ಪು ಬಣ್ಣದ ಕೊಟು ಗೀಟು ಗೀಟಿನ ಟೈ ಕಪ್ಪು ಬಣ್ಣದ ಪ್ಯಾಂಟು ಅದೇ ಬಣ್ಣದ ಬೆಲ್ಟು ಅಂದೇ ಪಾಲಿಶ್ ಮಾಡಿದ ಶೂಗಳನ್ನು ಧರಿಸಿ ಆ ಮಕ್ಕಳು ತಮ್ಮ ಬೆರಗುಗಣ್ಣುಗಳಿಂದ ಅಲ್ಲಿನ ಶ್ರೀಮಂತಿಕೆಯನ್ನು ವೀಕ್ಷಿಸಿಸುತ್ತ ಶಿಸ್ತಿನಿಂದ ಎಕ್ಸಲೇಟರನಲ್ಲಿ ಮೊರನೆ ಮಹಡಿಯ ಚಿತ್ರಮದಿರಕ್ಕೆ ಸಾಗುತಿದ್ದರು, ಅವರೆಲ್ಲ ನನ್ನೊಂದೆಗೆ ಅಂದೇ ಬಿಡುಗಡೆಯಾದ ಐಸ್ ಎಜ್ ೪ ಚಿತ್ರವನ್ನ ವೀಕ್ಷಿಸಲು ಬಂದಿದ್ದರು ಈ ಕಾಯಕದಲಿ ನನ್ನ ಕೆಲವು ಸ್ನೇಹಿತರು ನನ್ನ ಜೋತೆಗಿದ್ದರು ನನಗೆ ನಿಜವಾದ ಕರ್ತವ್ಯದ ಹಾದಿಯಲ್ಲಿ ನಡೆದಂಥ ಅನುಭವ ಚಿತ್ರಮಂದಿರದಲ್ಲಿ ತಮ್ಮ ತಮ್ಮ ಆಸನದಲ್ಲಿ ಆಸೀನರಾದ ಮಕ್ಕಳು ಚಿತ್ರದಲ್ಲಿ ಬರುವ ಪ್ರಾಣಿ ಪಕ್ಷೀಗಳ ಮಾತು ಆಟವನ್ನ ನೋಡುತ್ತ ಚಿತ್ರದಲ್ಲಿ ತಲ್ಲೀನರಾಗಿ ನಗುತ್ತ ಚಾಪ್ಪಾಲೆ ತಟ್ಟುತ್ತ ಕೆಲವೊಮ್ಮೆ ಕುಣಿದಾಡುತ್ತ ಸಂತೋಷದ ಸುಂದರ ಪ್ರಪಂಚವನ್ನು ತಮ್ಮದಾಗಿಸಿಕೊಂಡಿದ್ದರು..ಈ ದಿನದ ನಿರೀಕ್ಷೆ ಆ ಮಕ್ಕಳಿಗಿತ್ತೆ ಎಂಬುದು ತಿಳಿಯದು ಅವರೆಲ್ಲ ಸಮಾಜದಲ್ಲಿ ಮಾನವರೆಂದು ತಿಳಿದ ನನ್ನಂತವರ ನಡುವೇ ಇದ್ದು ಅನಾಥರೆಂದೆನಿಸಿಕೊಂಡವರು ಆ ಮಕ್ಕಳ ಸಂತೋಷವನ್ನು ನಗುವನ್ನು ಕಂಡು ನಾನು ನನ್ನ ಸ್ನೇಹಿತರು ನಮ್ಮ ನಮ್ಮ ಮುಖವನ್ನು ಒಮ್ಮೆ ನೋಡಿ ನಗೆ ಬಿರಿದೇವು ನನ್ನಲ್ಲಿ ಜೀವನದ ಸಾರ್ಥಕ ಭಾವವೊಂದು ಮೂಡುತ್ತಿದ್ದಂತೆ ಪಿಳ್ಳಂಗೋವಿಯ ಚೆಲುವ ಕೃಷ್ಣನನ್ನು ಎಲ್ಲಿ ನೋಡಿದಿರಿ ಗಾನದ ಸೋನಿ ಏರಿಕ್ಸನ್ ಮೋಬೈಲನ ಎಲರಂ ಸರಿಯಾಗಿ ಐದು ಘಂಟೆಗೆ ಮೊಳಗಿತ್ತು ನಿದ್ರೆಯಿಂದ ಎದ್ದು ಕುಳಿತು ಗಾಢವಾಗಿ ನಿಟ್ಟುಸಿರುಬಿಟ್ಟು ಯೋಚಿಸಿದೆ ನನಸಾದೀತೆ ಈ ಕನಸು ನಾಳೆಯಾದರು ನನಗೆ ಸಿಗುವುದು ಎಂದಿದ್ದ ಕೆಲಸದ ಸುದ್ದಿ ಬಂದಿತ್ತೆ ಆದಾಗಲೇ ನಾಲ್ಕು ತಿಂಗಳಾಗುತ್ತ ಬಂದಿತ್ತು ಪ್ರೈವೇಟ್ ಭ್ಯಾಂಕಿನ ಆಫೀಸರ್ ಹುದ್ದೆಯನ್ನು ನನ್ನದೆ ಬುಡಾಯದ ವಾದವನ್ನು ಮಂಡಿಸಿ ಬಿಟ್ಟು ಬಂದು ನನ್ನದೆ ಆರ್ಥಿಕ ಸ್ವಾತಂತ್ರದ ಬಗ್ಗೆ ಆಲೋಚಿಸುತ್ತಿದೆ ಅಂಥದರಲ್ಲಿ ಈ ಕನಸು ನನಸಾದೀತೆ ಮನಸ್ಸಿನಲ್ಲಿ ಮುಂದೇನು ಎಂಬ ಭಯ ಮೇಲ್ಲನೆ ಅವರಿಸುತಿತ್ತು ನಾನು ನನ್ನ ಕೆಲಸದ ಹುಡುಕಾಟವನ್ನು ಮುಂದುವರಿಸುತ್ತಿದ್ದೇನೆಯೇ ಅಥವಾ ಕೇವಲ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿದ್ದೇನೆಯೆ? ಏನು ಪ್ರಯತ್ನ ಮಾಡದೆ ದೇವರಲ್ಲಿ ನನ್ನನು ಸಲಹು ಎಂದು ಕೇಳಿಕೊಳ್ಳುತ್ತಿದ್ದೆನೇ ಒಂದೋ ತಿಳಿಯದಾಗಿತ್ತು. ಮನಸ್ಸಿಗೆ ಸಾಂತ್ವನ ಕೊಡುವ ಉತ್ತರವೆಂಬಂತೆ ಹೇಳಿದ ನಿರೇಕ್ಷೆ ಮತ್ತು ಪ್ರಯತ್ನ ಒಟ್ಟಗಿ ಸಾಗುತ್ತಿದೆ ಪ್ರಯತ್ನವನ್ನು ಮುಂದುವರಿಸಿದರೆ ಸಫಲತೆ ಖಂಡಿತ ದೋರಕುತ್ತದೆ.
ಆದರೆ ಈ ಕನಸು ನನಸಾದೀತೆ ಇನ್ನೊಮ್ಮೆ ನನ್ನನ್ನೆ ಪ್ರಶ್ನೆಸಿದೆ ನನ್ನನ್ನೆ ಅಣುಕಿಸುವಂತೆ ಮನಸ್ಸಿನ ಮೊಲೆಯಿಂದ ಇನ್ನೊಂದು ಪ್ರಶ್ನೆ ನೆನಪಿದ್ದಿತೇ ಈ ಕನಸು ? ಆಂದು ಕಷ್ಟಪಟ್ಟು ಆಫೀಸರ್ ಹುದ್ದೆಗೆ ಏರಿದ ಮೇಲೆ ನನ್ನ ಯೋಚನೆಗಳು ಈ ಮಕ್ಕಳ ಬಗ್ಗೆ ಏಕೆ ಇರಲಿಲ್ಲ ನನ್ನದೆ ಸಂತಸದ ಹುಡುಕಾಟದಲ್ಲಿ ಕೋಳ್ಳಬೇಕಿಂದದ್ದು ಬೈಕ್ ಆಮೇಲೆ ಮನೆ ಆಮೇಲೆ ಕಾರು ಆಮೇಲೆ ಬಂಗಲೇ ಆಮೇಲೆ ಬೇಂಜು ಕಾರು ಈ ನನ್ನ ಏರುತ್ತಿದ್ದ ಆಸೆಗಳ ಬೆಟ್ಟವನ್ನು ಹತ್ತಲು ಸುರುಮಾಡಿ ಎಡವಿದೆ ಎಷ್ಟೊಂದು ಸಲ ಚಿತ್ರಮಂದಿರದಲ್ಲಿ ನೋಡಿದ ಚಿತ್ರವನ್ನೆ ಗೆಳೆಯರೊಂದೆಗೆ ನೋಡಲಿಲ್ಲ, ಬ್ರಾಡೆಂಡ್ ಬಟ್ಟೆಗಳನ್ನು ತಂದು ಕಪಾಟಿನಲ್ಲಿ ತುಂಬಿಡಲಿಲ್ಲ, ಐಷಾರಮಿ ಹೋಟೆಲಿನಲ್ಲಿ ತಿಂದು ಕುಡಿದು ನಮ್ಮ ಸಂತೋಷವನ್ನ ಆಚರಿಸಲಿಲ್ಲ ಆಗ ಒಂದು ಸಲವಾದರು ಈ ಮಕ್ಕಳಿಗೆ ಕೊಡಬೇಕಾದ ಸ್ನೇಹ ಪ್ರೀತಿ ಸಂತೋಷದ ನೆನಪಾಗಲಿಲ್ಲವೇಕೆ ನನಗೆ. ಮಾನವತೆಯನ್ನು ಮೆರೆಯಬೇಕಾದಗ ಮರೆತು ಇಲ್ಲದಾಗ ಮಾನವತೆಯ ಬಗೆ ಯೋಚಿಸುತ್ತೆವೆಯೇ ನನ್ನಂತವರು ಸಂತಸದಲ್ಲಿದ್ದಾಗ ದೇವರನ್ನು ಮರೆತು ಕಷ್ಟದಲ್ಲಿ ದೇವರನ್ನು ನೆನೆಯುವುದರ ಅರ್ಥ ಇದೆ ಇರಬೇಕು. ಸಶಕ್ತನಾಗಿದ್ದಾಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಮರೆತು ಕಷ್ಟದಲ್ಲಿದ್ದಾಗ ಒಳ್ಳೆಯ ಕಾರ್ಯದ ಬಗ್ಗೆ ಯೋಚಿಸಿ ಶಕ್ತಿ ಸಾಲದು ಎಂದು ಕೊರಗುತ್ತೇನೆ ನಾನು. ನೆನಪಿದ್ದಿತೇ ಈ ಕನಸ್ಸು ಪ್ರಶ್ನೆ ನನ್ನ ಭಾವನೆಯ ಅಂಧಕಾರಕ್ಕೆ ಹಿಡಿದ ಕನ್ನಡಿ ಎನಿಸಿತ್ತು ಮರೆಯಬಾರದು ಈ ಕನಸನ್ನು ಈ ಕನಸೇ ನನಗೆ ಹೊಸ ಬೆಳಕು.
ಅಸತೋಮ ಸದ್ಗಮಯತಮಸೋಮ ಜೋತಿರ್ಗಮಯಮೃತ್ಯೋಮ ಅಮೃತಾಂಗಮಯ.
ಆಸೆಯಿಂದ ಮುಕ್ತನಾಗಿ ಸತ್ಯದ ಕಡೆಗೆ, ಆಸೆಯಿಂದ ಮುಕ್ತನಾಗಿ ಬೆಳಕಿನ ಕಡೆಗೆ, ಆಸೆಯಿಂದ ಮುಕ್ತನಾಗಿ ತ್ಯಾಗದ ಕಡೆಗೆ. ಆಸೆಯೇ ಕತ್ತಲು, ಆಸೆಯೇ ಮೃತ್ಯು ಜೀವನವೇ ತ್ಯಾಗ ಎಂಬ ಬೆಳಕು ಗೋಚರಿಸುತ್ತಿದಂತೆ ಜೀವನ ಸಾರ್ಥಕದೆಡೆಗೆ ನನ್ನ ಪ್ರಯಾಣ.
Wednesday, February 3, 2010
Subscribe to:
Post Comments (Atom)
No comments:
Post a Comment